
6th July 2025
.*ಜನ್ಮಾಂತರದ ಜೋಗಿ*
ಲೋಕವ ಉದ್ದರಿಸುವ ಕರುಣೆಯ ಕಣ್ಣು
ಅನುರಾಗದೆ ಹಂಚಿದೆ ವಾತ್ಸಲ್ಯದ ಹಣ್ಣು
ದಯಮಾಡಿ ತೊರೆದು ಹೋಗದಿರು ಜೋಗಿ
ಕಂಡಂತೆ ಕಂಡು ಮರೆಯಾದ ಬೈರಾಗಿ
ಹೃದಯದೊಳು ಹಚ್ಚಿದೆ ಶಾಂತಿಮಂತ್ರದ ಜ್ಯೋತಿ
ಲೋಕಕ್ಕೆಲ್ಲ ಪಸರಿಸಿದೆ ಪ್ರೇಮ ಪುಷ್ಪದ ಕಾಂತಿ
ಬೇಡಿದೆಲ್ಲ ಕೊಟ್ಟವನೇ ಓಡದಿರು ಜೋಗಿ
ಉಸಿರಲ್ಲಿ ಉಸರಾಗಿ ಕಾಣದಾದೆ ವಿರಾಗಿ
ಹೂಡಿದೆ ಮಂತ್ರ ತಂತ್ರಗಳ ಮಾಯಾಜಾಲಗಳನ್ನು
ಬೊಂಬೆ ಆಟದಂತೆ ಆಡಿಸಿದೆ ಪ್ರಪಂಚವನ್ನು
ನಿನ್ನ ಕೈಲಿದೆ ಹಾವು ಏಣಿ ಆಟ ಜೋಗಿ
ಆಟ ಅರಿಯದೆ ದೃತಿಕೆಟ್ಟೆ ನಾ ಬಳಲಿ ಸೊರಗಿ
ಗಾಳಿ ಬೇಕು ದೀಪ ನಿರಂತರ ಉರಿಯಲು
ಬಿರುಗಾಳಿ ಬೇಡ ದೀಪವದು ಆರಿ ಹೋಗಲು
ಎಲ್ಲವೂ ನಿನ್ನ ಕೈ ಚಳಕವು ತಿಳಿದಿದೆ ಜೋಗಿ
ಭಕ್ತರಿಗಾಗಿ ಮರುಕ ಪಡುವ ಮಹಾತ್ಯಾಗಿ
ಕಡಲಲಿ ಹಡಗನು ತೇಲಿಸಿದ ನಾವಿಕ ನೀನು
ವೈಚಿತ್ರ್ಯದಲ್ಲಿ ದೈತ್ಯ ಅಲೆಗಳಲ್ಲಿ ನಿಲ್ಲಿಸಿದೆ ಬದುಕನು
ಜನ್ಮಾಂತರದ ಬಂಧನ ನಿನ್ನೊಂದಿಗಿದೆ ಜೋಗಿ
ಮುಕ್ತಿ ಎಂಬ ಪೀಠವನ್ನು ದಯಪಾಲಿಸು ಯೋಗಿ
*ಅರುಣ್ ಕುಮಾರ್ ಎಂ*
ಶ್ರೀನಿವಾಸಪುರ ಕೋಲಾರ ಜಿಲ್ಲೆ
968642-1787
ಐವಿಎಫ್ ವಿಧಾನ, ಭಾವನಾ ರಾಮಣ್ಣ, ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯ ಹಾಗು ಭಾರತದ ಕೌಟುಂಬಿಕ ವ್ಯವಸ್ಥೆ.......
ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಅಧ್ಯಕ್ಷರಾಗಿದ್ದ ಪ್ರಲ್ಲಾದಾಚಾರ್ಯ ಸೌದಿ ನಿಧನ